ಪಠ್ಯಪುಸ್ತಕ ಪರಿಷ್ಕರಣೆ – ಒಂದು ಅನಗತ್ಯ, ಭೇದ ಕಲ್ಪಿಸುವ ಮತ್ತು ದುಬಾರಿ ಕಾರ್ಯ

ಪ್ಪ್ರಕಟನೆಯ ಕೃಪೆಗಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಕರ್ನಾಟಕ ಸರ್ಕಾರವನ್ನು ದೃಢವಾಗಿ ಒತ್ತಾಯಿಸುತ್ತೇವೆ: ಉತ್ತಮವಾಗಿ ವ್ಯಾಖ್ಯಾನಿಸಲಾದ ಪಠ್ಯಕ್ರಮದ ಚೌಕಟ್ಟು ಮತ್ತು ಪ್ರಕ್ರಿಯೆಗಳನ್ನು ಅನುಸರಿಸದೆ, ಅನಿಯಂತ್ರಿತ ರೀತಿಯಲ್ಲಿ ಪಠ್ಯಪುಸ್ತಕಗಳಲ್ಲಿ ಮಾಡಲಾಗಿರುವ ಇತ್ತೀಚಿನ ಪ್ರತಿಗಾಮಿ ಪರಿಷ್ಕರಣೆಗಳನ್ನು ಹಿಂತೆಗೆದುಕೊಳ್ಳಿ. ಹಿಂದಿನ ಪರಿಷ್ಕರಣೆಯ ನಂತರ ಹಲವು ವರ್ಷಗಳಿಂದ ಬಳಕೆಯಲ್ಲಿರುವ ಪಠ್ಯಪುಸ್ತಕಗಳನ್ನು ಮುದ್ರಿಸಿ, ಸರಬರಾಜು ಮಾಡಿ ಮತ್ತು ಮಕ್ಕಳಿಗೆ ಒದಗಿಸಿ. ರಾಜ್ಯದಲ್ಲಿ ಕೋವಿಡ್ ನಿಂದ ಉಂಟಾಗಿರುವ ಗಂಭೀರ ಶಿಕ್ಷಣದ ಬಿಕ್ಕಟ್ಟನ್ನು ಪರಿಹರಿಸಲು ಶಕ್ತಿಸಾಮರ್ಥ್ಯಗಳನ್ನು ಕೇಂದ್ರೀಕರಿಸಿ, ಕ್ರಿಯಾಯೋಜನೆ…

ಹಿಜಾಬ್ ಧರಿಸಿರುವ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳನ್ನು ಗುರಿಯಾಗಿಸುವುದು ಮತ್ತು ಅವರನ್ನು ಶಾಲಾ ಕಾಲೇಜುಗಳಿಂದ ಹೊರಗಿಡುವುದರ ಬಗ್ಗೆ ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು ಮತ್ತು ವ್ಯಕ್ತಿಗಳ ಹೇಳಿಕೆ

Statement in Hindi हिन्दी and in English ೧. ಹಿಜಾಬ್, ಶಿರಸ್ತ್ರಾಣವನ್ನು ಧರಿಸುತ್ತಾರೆ ಎಂಬ ಕಾರಣಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳನ್ನು ಶಿಕ್ಷಕಿಯರನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಹಾಜರಾಗುವುದನ್ನು ವ್ಯವಸ್ಥಿತವಾಗಿ ತಡೆಗಟ್ಟುವುದನ್ನು ನಾವು ಆತಂಕ ಮತ್ತು ವಿಷಯದಿಂದ ಗಮನಿಸುತ್ತೇವೆ. ಶಿಕ್ಷಣ ಆಡಳಿತ ಮಂಡಳಿ ಮತ್ತು ಸರ್ಕಾರದ ಪರೋಕ್ಷ ಹಾಗು ಸ್ಪಷ್ಟ ಬೆಂಬಲವಿರುವ ಈ ಕ್ರಮ ಸಂವಿಧಾನದ ಸ್ವಾತಂತ್ರ್ಯ (ಆರ್ಟಿಕಲ್ 19, 25) ಮತ್ತು ಸಮಾನತೆ (ಆರ್ಟಿಕಲ್ 14) ಸೇರಿದಂತೆ, ಮಹಿಳೆಯರ…

ರಾಷ್ಟ್ರೀಯ ಶೈಕ್ಷಣಿಕ ತುರ್ತುಪರಿಸ್ಥಿತಿ ಒಕ್ಕೂಟ

Bengali, English, Hindi, Malayalam, Telugu 26 ಕೋಟಿ ಮಕ್ಕಳ ಶಿಕ್ಷಣದ ಪುನರಾರಂಭ ಮತ್ತು ನವೀಕರಣ ಭಾರತದಲ್ಲಿ ತಲೆ ಎತ್ತಿ ದೊಡ್ಡದಾಗುತ್ತಿರುವ ಶೈಕ್ಷಣಿಕ ತುರ್ತುಪರಿಸ್ಥಿತಿಯ ಕುರಿತು ಕಾಳಜಿ ಇರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು 16 ಜುಲೈ 2021ರಂದು ವರ್ಚುಯಲ್‌ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯಲ್ಲಿ ನಮ್ಮ ದೇಶದ ಮಕ್ಕಳು ಅದರಲ್ಲೂ ಅತ್ಯಂತ ಬಡ ಹಾಗೂ ಅವಕಾಶ ವಂಚಿತ ಗುಂಪುಗಳ ಗಂಡಾಂತರವನ್ನು ಬಗೆಹರಿಸುವ ಕುರಿತಾದ ಚರ್ಚೆ ನಡೆಸಲಾಯಿತು. ಒಕ್ಕೂಟ ಎರಡು ರೀತಿಗಳಲ್ಲಿ…

ಒಂದನೇ ತರಗತಿಯಿಂದಲೇ ಶಾಲೆ ಕೂಡಲೇ ಪ್ರಾರಂಭವಾಗಲಿ: ಡಾ.ನಿರಂಜನಾರಾಧ್ಯ

ಒಂದನೇ ತರಗತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ಬಿಸಿ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟದೊಂದಿಗೆ ಶಾಲೆಗಳನ್ನು ಕೂಡಲೇ ಪ್ರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾಪೋಷಕ ಹಾಗೂ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರ ಶಾಲೆಗಳನ್ನು ತೆರೆಯುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಆ.23ರಿಂದ ಪ್ರಾರಂಭಿಸಲು ಮುಂದಾಗಿರುವುದನ್ನು ಎಸ್‍ಡಿಎಂಸಿ ವೇದಿಕೆ ಸ್ವಾಗತಿಸುತ್ತದೆ.…